ಸಾಧನಾ ಸರ್ಗಮ್ (ಜನನ ಮಾರ್ಚ್ ೭, ೧೯೬೯) ಭಾರತೀಯ ಹಿನ್ನೆಲೆ ಗಾಯಕಿ . ಚಲನಚಿತ್ರ ಸಂಗೀತದ ಜೊತೆಗೆ, ಅವರು ಭಕ್ತಿಗೀತೆಗಳು, ಶಾಸ್ತ್ರೀಯ ಸಂಗೀತ, ಗಝಲ್, ಪ್ರಾದೇಶಿಕ ಚಿತ್ರಗೀತೆಗಳು ಮತ್ತು ಪಾಪ್ ಆಲ್ಬಮ್ಗಳನ್ನು ಹಾಡಿದ್ದಾರೆ . ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ , ದಕ್ಷಿಣ ಭಾರತ ಸಿನೆಮಾ ಫಿಲ್ಮ್ಫೇರ್ ಪ್ರಶಸ್ತಿ, ಐದು ಬಾರಿ ಮಹಾರಾಷ್ಟ್ರ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ನಾಲ್ಕು ಬಾರಿ ಗುಜರಾತ್ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿದ್ದಾರೆ. ಸರ್ಗಮ್ ಅವರಿಗೆ ಮಧ್ಯ ಪ್ರದೇಶದ ಸರ್ಕಾರದಿಂದ 'ಲತಾ ಮಂಗೇಶ್ಕರ್ ಪ್ರಶಸ್ತಿ' ನೀಡಲಾಗಿದೆ. ಚಲನಚಿತ್ರಗಳು, ಕಿರುತೆರೆ ಧಾರಾವಾಹಿಗಳು, ಭಕ್ತಿಗೀತೆಗಳು ಮತ್ತು ಪಾಪ್ ಸಂಗೀತದ ಅಲ್ಬಮ್ ಎಲ್ಲಾ ಸೇರಿ ಸರ್ಗಂ ಅವರು ಸುಮಾರು ೩೪ ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ. ದಕ್ಷಿಣ ಭಾರತೀಯರಲ್ಲದಿದ್ದರು ದಕ್ಷಿಣ ಭಾರತ ಸಿನೆಮಾ ಗೀತೆಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಹೆಗ್ಗಳಿಕೆ ಇವರದು. ಅವರು ಹಿಂದೂಸ್ಥಾನಿ ಶಾಸ್ತ್ರೀಯ ಸ೦ಗೀತ ಗಾಯಕಿ ಕೂ. ೧೯೮೦ ರ ದಶಕದ ಆರಂಭದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು, ಹಿಂದಿ, ತಮಿಳು, ಮರಾಠಿ, ಓಡಿಯಾ, ತೆಲುಗು, ಬೆಂಗಾಲಿ, ಕನ್ನಡ, ಮಲಯಾಳಂ, ಗುಜರಾತಿ, ನೇಪಾಳಿ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ. == ಆರಂಭಿಕ ಜೀವನ == ಸರ್ಗಾಮ್ ಅವರು ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಡಬೊಲ್ ಎ೦ಬಲ್ಲಿ ಸಂಗೀತಗಾರರ ಕುಟುಂಬಕ್ಕೆ ಜನಿಸಿದರು. == ಅಂಕಿಅಂಶಗಳು == ಸರ್ಗಮ್ ಅವರು ೧೯೩೮ ಹಿಂದಿ ಗೀತೆಗಳು ಮತ್ತು ೧೧೧೧ ತಮಿಳು, ೨೫೦೦ ಬೆಂಗಾಲಿ ಮತ್ತು ಮರಾಠಿ ಭಾಷೆಯಲ್ಲಿ ೩೪೬೭ ಹಾಡುಗಳನ್ನು ಹಾಡಿದ್ದಾರೆ. ಅವರು ೩೪ ಭಾರತೀಯ ಭಾಷೆಗಳಲ್ಲಿ ೧೫೦೦೦ ಗೀತೆಗಳನ್ನು ಹಾಡಿದ್ದಾರೆ. === ಕನ್ನಡ ಸಿನಿಮಾದಲ್ಲಿ ಜನಪ್ರಿಯತೆ === ಕನ್ನಡದ 'ಸವಾರಿ' ಚಿತ್ರದಲ್ಲಿ 'ಮರಳಿ ಮರೆಯಾಗಿ' ಹಾಡು ಇವರಿಗೆ ಜನಪ್ರಿಯತೆ ತ೦ದುಕೊಟ್ಟಿತು. ಯುನಿನಾರ್ ಸೌತ್ ರೇಡಿಯೋ ಮಿರ್ಚಿ ಪ್ರಶಸ್ತಿಗಳು ೨೦೦೯ - ಅತ್ಯುತ್ತಮ ಹಿನ್ನೆಲೆ ಗಾಯಕಿ - "ಮರಳಿ ಮರೆಯಾಗಿ" (ಸವಾರಿ) ೨೦೦೯ - ವರ್ಷದ ಹಾಡು - "ಮರಳಿ ಮರೆಯಾಗಿ" (ಸವಾರಿ; ಸ೦ಗೀತ ಸಂಯೋಜಕ ಮನಿಕಾ೦ತ್ ಕದ್ರಿ ಅವರೊಂದಿಗೆ) ೨೦೦೯- ಕನ್ನಡದ ಅತ್ಯುತ್ತಮ ಕನ್ನಡ ಕೇಳುಗರ ಆಯ್ಕೆ - "ಮರಳಿ ಮರೆಯಾಗಿ" (ಸವಾರಿ) == ಬಾಹ್ಯ ಕೊಂಡಿಗಳು == ಅನಧಿಕೃತ ವೆಬ್ಸೈಟ್ 2007-09-28 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==